Ticker

6/recent/ticker-posts

ತುಂಬಿದುದು ತುಳುಕದು ನೋಡಾ।। ವಚನ ವಿಶ್ಲೇಷಣೆ ।। ಅಕ್ಕಮಹಾದೇವಿಯವರ ವಚನಗಳು

ಶ್ರೀಗುರು ಬಸವಲಿಂಗಾಯ ನಮಃ

(ಈ ವಚನದ ಸರಳ ವಿಶ್ಲೇಷಣೆಯ ಸಂಪೂರ್ಣ ಚರ್ಚೆಯನ್ನು ವೀಕ್ಷಿಸಲು ಯೂಟ್ಯೂಬ್ ಲಿಂಕ್ ಬಳಸಿ)

ತುಂಬಿದುದು ತುಳುಕದು ನೋಡಾ. 
ನಂಬಿದುದು ಸಂದೇಹಿಸದು ನೋಡಾ. 
ಒಲಿದುದು ಓಸರಿಸದು ನೋಡಾ. 
ನೆರೆಯರಿದುದು ಮರೆಯದು ನೋಡಾ. 
ಚೆನ್ನಮಲ್ಲಿಕಾರ್ಜುನಯ್ಯಾ
ನೀನೊಲಿದ ಶರಣಂಗೆ ನಿಸ್ಸೀಮಸುಖವಯ್ಯಾ.


    ಈ ವಚನದಲ್ಲಿ ಅಕ್ಕನು  ದೃಢವಾದ ನಂಬಿಕೆ ಮತ್ತು ಅನುಭವದ ಆಳವನ್ನು ಒತ್ತಿಹೇಳಿದ್ದಾರೆ . ಒಮ್ಮೆ ತುಂಬಿದ ಪಾತ್ರೆ ಹೇಗೆ ತುಂಬಿ ತುಳುಕುವುದಿಲ್ಲವೋ, ಹಾಗೆಯೇ ನಿಜವಾದ ನಂಬಿಕೆ ಯಾವತ್ತೂ ಸಂದೇಹಿಸುವುದಿಲ್ಲ ಸತ್ಯ ಮತ್ತು ದೃಢತೆಯ  ಹಾಗೆಯೇ ನಿಜವಾಗಿ ನಂಬಿದವನು ಸಂಶಯಪಡುವುದಿಲ್ಲ ಎಂದು ಅಕ್ಕಮಹಾದೇವಿ ಹೇಳುತ್ತಾರೆ. ಅಲ್ಲದೆ, ನಿಜವಾದ ಪ್ರೀತಿ ಎಂದಿಗೂ ದೂರವಾಗುವುದಿಲ್ಲ ಮತ್ತು ಸಂಪೂರ್ಣವಾಗಿ ಅರ್ಥಮಾಡಿಕೊಂಡ ವಿಷಯ ಎಂದಿಗೂ ಮರೆತುಹೋಗುವುದಿಲ್ಲ ಎಂಬುದನ್ನು ಇದು ಸೂಚಿಸುತ್ತದೆ, ಅಂತಿಮವಾಗಿ ನಿಷ್ಕಳಂಕವಾಗಿ ದೈವದ ಅಸ್ತಿತ್ವ ನಂಬಿದ ಶರಣರಿಗೆ ಸೃಷ್ಟಿಕರ್ತನ ಇರುವಿಕೆ ತಿಳಿಯುತ್ತದೆ ಎಂಬುದನ್ನು ಈ ವಚನದಲ್ಲಿ ಸತ್ಯ ಪ್ರತಿಧ್ವನಿಸುತ್ತದೆ.  


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು