ಶ್ರೀಗುರು ಬಸವಲಿಂಗಾಯ ನಮಃ
(ಈ ವಚನದ ಸರಳ ವಿಶ್ಲೇಷಣೆಯ ಸಂಪೂರ್ಣ ಚರ್ಚೆಯನ್ನು ವೀಕ್ಷಿಸಲು ಯೂಟ್ಯೂಬ್ ಲಿಂಕ್ ಬಳಸಿ)
ಆವಾಗಳೂ ಎನ್ನ ಮನ ಉದರಕ್ಕೆ ಹರಿವುದು.
ಕಾಣಲಾರೆನಯ್ಯಾ ನಿಮ್ಮುವನು, ಭೇದಿಸಲರಿಯೆ.
ಮಾಯದ ಸಂಸಾರದಲ್ಲಿ ಸಿಲುಕಿದೆನು.
ಎನ್ನ ದೇವ ಚೆನ್ನಮಲ್ಲಿಕಾರ್ಜುನಯ್ಯಾ,
ನಿಮ್ಮ ಹೊದ್ದುವಂತೆ ಮಾಡಾ, ನಿಮ್ಮ ಧರ್ಮ.
ಈ ವಚನದಲ್ಲಿ ಅಕ್ಕನ ಆಳವಾದ ಆಧ್ಯಾತ್ಮಿಕ ತುಮುಲವನ್ನು ತೋರಿಸುತ್ತದೆ. ತಮ್ಮ ಮನಸ್ಸು ಲೌಕಿಕ ಆಸೆಗಳತ್ತ ಸಾಗುತ್ತಿರುವುದನ್ನು ಮತ್ತು ತಮ್ಮ ಆರಾಧ್ಯ ಚೆನ್ನಮಲ್ಲಿಕಾರ್ಜುನನನ್ನು ಸಂಪೂರ್ಣವಾಗಿ ಗ್ರಹಿಸಲು ಹಾಗೆಯೆ ಭೇದಿಸಲು ಸಾಧ್ಯವಾಗದಿರುವುದನ್ನು ಕಳವಡಿಸಿದ್ದಾರೆ, ಮಾಯೆಯ ಸಂಸಾರಿಕ ಬಂಧನದಲ್ಲಿ ಸಿಲುಕಿಕೊಂಡಿದ್ದೇನೆ ಎಂದು ಹೇಳಿಕೊಳ್ಳುತ್ತ ಅಂತಿಮವಾಗಿ, ಅವರು ತಮ್ಮ ದೇವರಿಗೆ ತಮ್ಮನ್ನು ಪೂರ್ಣವಾಗಿ ಆವರಿಸಿಕೊಳ್ಳಲು ಮತ್ತು ತಮ್ಮನ್ನು ರಕ್ಷಿಸಲು ಪ್ರಾರ್ಥಿಸುತ್ತಾರೆ, ಇದು ಭೌತಿಕ ಲೋಕದಿಂದ ವಿಮೋಚನೆಗಾಗಿ ಅವರ ಹಂಬಲವನ್ನು ಎತ್ತಿಹಿಡಿಯುತ್ತದೆ.
0 ಕಾಮೆಂಟ್‌ಗಳು