Ticker

6/recent/ticker-posts

ತೆರಣಿಯ ಹುಳು ತನ್ನ ಸ್ನೇಹದಿಂದ ಮನೆಯ ಮಾಡಿ ।। ವಚನ ವಿಶ್ಲೇಷಣೆ ।। ಅಕ್ಕಮಹಾದೇವಿಯವರ ವಚನ

 ಶ್ರೀಗುರು ಬಸವಲಿಂಗಾಯ ನಮಃ



(ಈ ವಚನದ ಸರಳ ವಿಶ್ಲೇಷಣೆಯ ಸಂಪೂರ್ಣ ಚರ್ಚೆಯನ್ನು ವೀಕ್ಷಿಸಲು ಯೂಟ್ಯೂಬ್ ಲಿಂಕ್ ಬಳಸಿ) 


ತೆರಣಿಯ ಹುಳು ತನ್ನ ಸ್ನೇಹದಿಂದ 

ಮನೆಯ ಮಾಡಿ ತನ್ನ ನೂಲು ತನ್ನನೆ ಸುತ್ತಿ ಸಾವಂತೆ

ಮನಬಂದುದನು ಬಯಸಿ ಬೇವುತ್ತಿದ್ದೇನಯ್ಯಾ. 

ಎನ್ನ ಮನದ ದುರಾಶೆಯ ಮಾಣಿಸಿ ನಿಮ್ಮತ್ತ ತೋರಾ ಚೆನ್ನಮಲ್ಲಿಕಾರ್ಜುನಾ 


    ಈ ವಚನದಲ್ಲಿ ಅಕ್ಕನು, ಮಾನವ ಮನಸ್ಸಿನ ದುರಾಸೆ ಮತ್ತು ಅದರ ಬಂಧನವನ್ನು ಕುರಿತು ಆಳವಾದ ಚಿಂತನೆಯನ್ನು ಓದುಗರ ಗಮನಕ್ಕೆ  ನೀಡಿದ್ದಾರೆ,  ತೆರಣಿ ಹುಳುವಿನ ಉಪಮೆಯನ್ನು ಬಳಸಿದ್ದಾರೆ; ಹೇಗೆ ಹುಳು ತನ್ನದೇ ನೂಲಿನಿಂದ ಗೂಡು ಕಟ್ಟಿ, ಕೊನೆಗೆ ಅದರಿಂದಲೇ ಬಂಧನಕ್ಕೊಳಗಾಗಿ ಸಾಯುತ್ತದೆಯೋ, ಹಾಗೆಯೇ ಮಾನವ ಮನಸ್ಸು ತನ್ನ ಆಸೆಗಳಿಂದಲೇ ಸುತ್ತುವರಿದು ದುಃಖಕ್ಕೆ ಸಿಲುಕುತ್ತದೆ ಎಂಬುದನ್ನು ಇದು ವಿವರಿಸುತ್ತದೆ. ಅಂತಿಮವಾಗಿ ತಮ್ಮ ಮನಸ್ಸಿನ ದುರಾಸೆಗಳನ್ನು ತ್ಯಜಿಸಿ, ತಮ್ಮ ಆರಾಧ್ಯದೈವವಾದ ಚೆನ್ನಮಲ್ಲಿಕಾರ್ಜುನನ ಕಡೆಗೆ ಮನಸ್ಸು ತಿರುಗಿಸಲು ಪ್ರಾರ್ಥಿಸುತ್ತಾ, ಆಧ್ಯಾತ್ಮಿಕ ವಿಮೋಚನೆಯ ಹಾದಿಯನ್ನು ಸೂಚಿಸುತ್ತಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು