ಶ್ರೀಗುರು ಬಸವಲಿಂಗಾಯ ನಮಃ
(ಈ ವಚನದ ಸರಳ ಸಂಪೂರ್ಣ ಚರ್ಚೆಯನ್ನು ಯೂಟ್ಯೂಬ್ ಚಾನಲ್ ನಲ್ಲಿ ವೀಕ್ಷಿಸಲು ಮೇಲಿನ ಲಿಂಕ್ ಬಳಸಿ)
ಕೆಡದಿರೆ ಕೆಡದಿರೆ, ಮೃಡನಡಿಯ ಹಿಡಿಯಿರೇ.
ದೃಢವಲ್ಲ ನೋಡಿರೆ ಸಂಸಾರಸುಖವು.
ಚೆನ್ನಮಲ್ಲಿಕಾರ್ಜುನ ಬರೆದ ಅಕ್ಷರವು ತೊಡೆಯದ ಮುನ್ನ ಬೇಗ ಬೇಗ ಶಿವಶರಣೆನ್ನಿ.
ಇಲ್ಲಿ ಅಕ್ಕಮಹಾದೇವಿಯ ಈ ವಚನವು ಮೃಡನ ಅಡಿಯ (ಶಿವನ ಚರಣ) ಹಿಡಿಯಲು ಅಂದರೆ ನಿಜ ದೈವತವ ಅರಿಯಲು ಪ್ರೇರೇಪಿಸುತ್ತಾರೆ , ಏಕೆಂದರೆ ಸಂಸಾರದ ಸುಖವು ಅಸ್ಥಿರ ಮತ್ತು ಶಾಶ್ವತವಲ್ಲ ಎಂದು . ಈ ವಚನದ ಮುಖ್ಯ ಉದ್ದೇಶವು ಲೌಕಿಕ ಆಸೆಗಳ ಅಶಾಶ್ವತತೆಯನ್ನು ಒತ್ತಿಹೇಳುವುದು ಮತ್ತು ಬದಲಾಗಿ ಶಿವಶರಣಾಗತಿಯ ಮಹತ್ವವನ್ನು ಬೋಧಿಸುವುದು, "ಚೆನ್ನಮಲ್ಲಿಕಾರ್ಜುನ ಬರೆದ ಅಕ್ಷರವು ತೊಡೆಯದ ಮುನ್ನ" ಅಂದರೆ ಸಮಯವಿರುವಾಗಲೇ ಶಿವನನ್ನು ಭಜಿಸುವಂತೆ ಕರೆ ನೀಡುತ್ತದೆ.
0 ಕಾಮೆಂಟ್‌ಗಳು