ಶ್ರೀಗುರು ಬಸವಲಿಂಗಾಯ ನಮಃ
(ಈ ವಚನದ ಸರಳ ಸಂಪೂರ್ಣ ಚರ್ಚೆಯನ್ನು ಯೂಟ್ಯೂಬ್ ಚಾನಲ್ ನಲ್ಲಿ ವೀಕ್ಷಿಸಲು ಮೇಲಿನ ಲಿಂಕ್ ಬಳಸಿ)
ಚಂದನವ ಕಡಿದು ಕೊರೆದು ತೇದಡೆ ನೊಂದೆನೆಂದು ಕಂಪ ಬಿಟ್ಟಿತ್ತೆ ?
ತಂದು ಸುವರ್ಣವ ಕಡಿದೊರೆದಡೆ ಬೆಂದು ಕಳಂಕ ಹಿಡಿಯಿತ್ತೆ ? ಸಂದುಸಂದು ಕಡಿದ ಕಬ್ಬನು ತಂದು ಗಾಣದಲ್ಲಿಕ್ಕಿ ಅರೆದಡೆ
ಬೆಂದು ಪಾಕಗುಡದೆ ಸಕ್ಕರೆಯಾಗಿ ನೊಂದೆನೆಂದು ಸಿಹಿಯ ಬಿಟ್ಟಿತ್ತೆ ?
ನಾ ಹಿಂದೆ ಮಾಡಿದ ಹೀನಂಗಳೆಲ್ಲವ ತಂದು ಮುಂದಿಳುಹಲು ನಿಮಗೇ ಹಾನಿ.ಎನ್ನ ತಂದೆ ಚೆನ್ನಮಲ್ಲಿಕಾರ್ಜುನಯ್ಯಾ
ನೀ ಕೊಂದಡೆಯೂ ಶರಣೆಂಬುದ ಮಾಣೆ.
ಇಲ್ಲಿ ಅಕ್ಕಮಹಾದೇವಿಯವರು, ಚಂದನವನ್ನು ಕತ್ತರಿಸಿ ತೇದರೂ ಅದರ ಸುಗಂಧವು ಎಂದಿಗೂ ಮಾಸುವುದಿಲ್ಲ, ಚಿನ್ನವನ್ನು ಕಾಯಿಸಿ ಒರೆದರೂ ಅದರ ಶುದ್ಧತ್ವ ಕಡಿಮೆಯಾಗುವುದಿಲ್ಲ, ಮತ್ತು ಕಬ್ಬನ್ನು ಜಜ್ಜಿ ರಸ ತೆಗೆದರೂ ಅದರ ಸಿಹಿಯು ಮಾಯವಾಗುವುದಿಲ್ಲ ಎಂದು ಉದಾಹರಣೆಗಳನ್ನು ನೀಡುತ್ತಾರೆ. ಈ ಹೋಲಿಕೆಗಳ ಮೂಲಕ, ಅವರು ತಮ್ಮ ಅಂತರಾಳದ ಚೆನ್ನಮಲ್ಲಿಕಾರ್ಜುನನ ಮೇಲಿನ ಅಚಲ ಭಕ್ತಿಯನ್ನು ಪ್ರಕಟಪಡಿಸುತ್ತಾರೆ. ತಮ್ಮ ಹಿಂದಿನ ತಪ್ಪುಗಳನ್ನು ಎತ್ತಿ ತೋರಿಸಿದರೂ ಸಹ, ಚೆನ್ನಮಲ್ಲಿಕಾರ್ಜುನನು ತಮ್ಮನ್ನು ಕೊಂದರೂ ಶರಣಾಗತಿಯನ್ನು ಬಿಡುವುದಿಲ್ಲ ಎಂಬುದು ಈ ವಚನದ ಮುಖ್ಯ ಉದ್ದೇಶವಾಗಿದೆ.
0 ಕಾಮೆಂಟ್‌ಗಳು