ಶ್ರೀಗುರು ಬಸವಲಿಂಗಾಯ ನಮಃ
(ಈ ವಚನದ ಸರಳ ಸಂಪೂರ್ಣ ಚರ್ಚೆಯನ್ನು ಯೂಟ್ಯೂಬ್ ಚಾನಲ್ ನಲ್ಲಿ ವೀಕ್ಷಿಸಲು ಮೇಲಿನ ಲಿಂಕ್ ಬಳಸಿ)
ಎನ್ನ ಮಾಯದ ಮದವ ಮುರಿಯಯ್ಯಾ.
ಎನ್ನ ಕಾಯದ ಕತ್ತಲೆಯ ಕಳೆಯಯ್ಯಾ.
ಎನ್ನ ಜೀವದ ಜಂಜಡವ ಮಾಣಿಸಯ್ಯಾ.
ಎನ್ನ ದೇವ ಚೆನ್ನಮಲ್ಲಿಕಾರ್ಜುನಯ್ಯಾ
ಎನ್ನ ಸುತ್ತಿದ ಪ್ರಪಂಚವ ಬಿಡಿಸಾ, ನಿಮ್ಮ ಧರ್ಮ!
ಇಲ್ಲಿ ಅಕ್ಕನ ವಚನವು ತಮ್ಮ ಅಹಂಕಾರ, ದೇಹದ ಅಜ್ಞಾನ ಮತ್ತು ಜೀವನದ ಗೊಂದಲಗಳನ್ನು ನಿವಾರಿಸುವಂತೆ ತಮ್ಮ ದೈವ ಚೆನ್ನಮಲ್ಲಿಕಾರ್ಜುನನನ್ನು ಬೇಡಿಕೊಳ್ಳುತ್ತಾರೆ. ಅವರು ತಮ್ಮನ್ನು ಸುತ್ತುವರಿದಿರುವ ಪ್ರಾಪಂಚಿಕ ಬಂಧಗಳಿಂದ ಮುಕ್ತಿ ಪಡೆಯಲು ಪ್ರಾರ್ಥಿಸುತ್ತಾರೆ. ಒಟ್ಟಾರೆ, ಈ ವಚನವು ಭಕ್ತಿ ಮತ್ತು ಆತ್ಮಶುದ್ಧೀಕರಣದ ಮಹತ್ವವನ್ನು ತಿಳಿಸುತ್ತದೆ..
0 ಕಾಮೆಂಟ್‌ಗಳು