Ticker

6/recent/ticker-posts

ಒಡಲ ಕಳವಳಕ್ಕಾಗಿ ಅಡವಿಯ ಪೊಕ್ಕೆನು ।। ವಚನ ವಿಶ್ಲೇಷಣೆ ।। ಅಕ್ಕಮಹಾದೇವಿಯವರ ವಚನ

 ಶ್ರೀಗುರು ಬಸವಲಿಂಗಾಯ ನಮಃ


(ಈ ವಚನದ ಸರಳ ಸಂಪೂರ್ಣ ಚರ್ಚೆಯನ್ನು ಯೂಟ್ಯೂಬ್ ಚಾನಲ್ ನಲ್ಲಿ ವೀಕ್ಷಿಸಲು ಮೇಲಿನ ಲಿಂಕ್ ಬಳಸಿ)

ಒಡಲ ಕಳವಳಕ್ಕಾಗಿ ಅಡವಿಯ ಪೊಕ್ಕೆನು. 
ಗಿಡುಗಿಡುದಪ್ಪದೆ ಬೇಡಿದೆನೆನ್ನಂಗಕ್ಕೆಂದು. 
ಅವು ನೀಡಿದವು ತಮ್ಮ ಲಿಂಗಕ್ಕೆಂದು. 
ಆನು ಬೇಡಿ ಭವಿಯಾದೆನು; ಅವು ನೀಡಿ ಭಕ್ತರಾದವು. 
ಇನ್ನು ಬೇಡಿದೆನಾದಡೆ ಚೆನ್ನಮಲ್ಲಿಕಾರ್ಜುನಯ್ಯಾ, ನಿಮ್ಮಾಣೆ.

         ಇಲ್ಲಿ ಅಕ್ಕಮಹಾದೇವಿಯು ತನ್ನ ಆಂತರಿಕ ಆತಂಕಗಳನ್ನು ನಿವಾರಿಸಿಕೊಳ್ಳಲು ಪ್ರಕೃತಿಯ ಮೊರೆ ಹೋಗಿ, ದೈಹಿಕ ಅವಶ್ಯಕತೆಗಳಿಗಾಗಿ "ಗಿಡುಗಿಡುದಪ್ಪದೆ ಬೇಡಿದೆನು" ಎಂದು ಹೇಳುತ್ತಾರೆ. 
ಆದರೆ, ಪ್ರಕೃತಿಯು  ತಾನು ಏನನ್ನು ಕೇಳಿದೆಯೋ, ಅವುಗಳನ್ನು ಪ್ರಕೃತಿಯು ತನ್ನ ಸ್ವಂತ ಆರಾಧನೆಗೆಂದು ಅರ್ಪಿಸಿಕೊಂಡು, ಅಕ್ಕನನ್ನ  "ಭವಿ" (ಲೌಕಿಕ ಆಸೆಗಳಿರುವವಳು) ಎಂದು ಭಾವಿಸಿದರೆ, ತಾವುಗಳು  ನೀಡಿದ್ದರಿಂದ  "ಭಕ್ತರಾದವು" (ಭಕ್ತಿಭಾವ ಹೊಂದಿದವು) ಎಂದು ವ್ಯಂಗ್ಯವಾಡುತ್ತಾರೆ. ಅಂತಿಮವಾಗಿ, ಈ ಅನುಭವದಿಂದ ಕಲಿತು, "ಇನ್ನು ಬೇಡಿದೆನಾದಡೆ ಚೆನ್ನಮಲ್ಲಿಕಾರ್ಜುನಯ್ಯಾ, ನಿಮ್ಮಾಣೆ" ಎಂದು ಹೇಳುವ ಮೂಲಕ ಭವಿಷ್ಯದಲ್ಲಿ ತಾನು ಯಾವುದೇ ಲೌಕಿಕ ಬಯಕೆಗಳನ್ನು ತ್ಯಜಿಸಿ, ಚೆನ್ನಮಲ್ಲಿಕಾರ್ಜುನನಲ್ಲಿ ಮಾತ್ರ ಸಂಪೂರ್ಣ ಶರಣಾಗುವುದಾಗಿ ದೃಢ ಸಂಕಲ್ಪ ಮಾಡುತ್ತಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು