ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕಾಗಿ ಶ್ರಮಿಸಿದ ಮಹಾಂತ ಜೋಳಿಗೆಯ ಕರ್ತೃ ಡಾ. ಮಹಾಂತ ಶಿವಯೋಗಿಗಳು. ಅವರು ತಮ್ಮ 'ಮಹಾಂತ ಜೋಳಿಗೆ' ಕಾರ್ಯಕ್ರಮದ ಮೂಲಕ ವ್ಯಸನಗಳ ವಿರುದ್ಧ ಅರಿವು ಮೂಡಿಸಿ, ಲಕ್ಷಾಂತರ ಜನರನ್ನು ವ್ಯಸನಗಳಿಂದ ಮುಕ್ತಗೊಳಿಸಲು ಶ್ರಮಿಸಿದರು.
ಡಾ. ಮಹಾಂತ ಶಿವಯೋಗಿಗಳು ಜಾತಿ, ಮತ, ಧರ್ಮ, ಭಾಷೆ ಎನ್ನದೇ ಇಡೀ ದೇಶದಲ್ಲಿ ಮತ್ತು ವಿದೇಶಗಳಲ್ಲಿಯೂ ವ್ಯಸನಗಳ ವಿರುದ್ಧ ಹೋರಾಡಿದರು. ಅವರು ದುಶ್ಚಟಗಳ ಭಿಕ್ಷೆ ಬೇಡುತ್ತಾ, ನಾಡಿನ ಪ್ರಖ್ಯಾತ ವೈದ್ಯರು, ಸಮಾಜ ವಿಜ್ಞಾನಿಗಳು, ಸಾಹಿತಿಗಳು, ಕವಿಗಳು ಮತ್ತು ಧರ್ಮ ಗುರುಗಳನ್ನು ಸೇರಿಸಿ ಉಪನ್ಯಾಸಗಳನ್ನು ಏರ್ಪಡಿಸುತ್ತಿದ್ದರು. ಅವರ ಈ ಪ್ರಯತ್ನದಿಂದಾಗಿ ಅನೇಕ ಜನರು ವ್ಯಸನಗಳಿಂದ ಮುಕ್ತರಾಗಿ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ.
ರಾಜ್ಯ ಸರ್ಕಾರವು ಡಾ. ಮಹಾಂತ ಶಿವಯೋಗಿಗಳ ಜನ್ಮದಿನವನ್ನು ಪ್ರತಿವರ್ಷ (ಆಗಸ್ಟ್ 1) ರಾಜ್ಯಾದ್ಯಂತ ವ್ಯಸನ ಮುಕ್ತ ದಿನವನ್ನಾಗಿ ಆಚರಿಸುತ್ತದೆ. ಈ ದಿನಾಚರಣೆಯು ರಾಜ್ಯವನ್ನು ವ್ಯಸನ ಮುಕ್ತ ರಾಜ್ಯವನ್ನಾಗಿ ಮಾಡಲು ಸಾರ್ವಜನಿಕರಿಗೆ ಮತ್ತು ಯುವಜನತೆಗೆ ಪ್ರೇರಣೆಯಾಗಲಿದೆ.

0 ಕಾಮೆಂಟ್‌ಗಳು