ಶ್ರೀಗುರು ಬಸವಲಿಂಗಾಯ ನಮಃ
(ಈ ವಚನದ ಸಂಪೂರ್ಣ ವಿಶ್ಲೇಷಣೆಯನ್ನು ಚರ್ಚೆ ಮೂಲಕ ವೀಕ್ಷಿಸಲು ಈ ಮೇಲಿನ ಯೂಟ್ಯೂಬ್ ಲಿಂಕ ಬಳಸಿ )
ಆರೂ ಇಲ್ಲದವಳೆಂದು ಆಳಿಗೊಳಲುಬೇಡ ಕಂಡೆಯಾ?
ಏನ ಮಾಡಿದಡೂ ಆನಂಜುವಳಲ್ಲ.
ತರಗೆಲೆಯ ಮೆಲಿದು ಆನಿಹೆನು, ಸರಿಯ ಮೇಲೊರಗಿ ಆನಿಹೆನು. ಚೆನ್ನಮಲ್ಲಿಕಾರ್ಜುನಯ್ಯಾ, ಕರ ಕೇಡನೊಡ್ಡಿದಡೆ ಒಡಲನು ಪ್ರಾಣವನು ನಿಮಗರ್ಪಿಸಿ ಶುದ್ಧಳಹೆನು.
ಈ ವಚನದಲ್ಲಿ ಅಕ್ಕಮಹಾದೇವಿಯವರು ವಚನಗಳ ಮೂಲಕ ತಾನು ಯಾರೊಬ್ಬರಿಗೂ ಅಂಜುವವಳಲ್ಲ ಎಂದು ಹೇಳುತ್ತಾಳೆ. ತಾನು ಒಣಗಿದ ಎಲೆಗಳನ್ನು ತಿಂದು, ಕೊಂಬೆಗಳ ಮೇಲೆ ಮಲಗಿ ಬದುಕಬಲ್ಲೆನೆಂದೂ, ಇದು ಚೆನ್ನಮಲ್ಲಿಕಾರ್ಜುನನಿಗೆ ತನ್ನ ಸಂಪೂರ್ಣ ಶರೀರ ಮತ್ತು ಪ್ರಾಣವನ್ನು ಸಮರ್ಪಿಸಲು ಸಿದ್ಧಳಾಗಿರುವ ತನ್ನ ಶುದ್ಧ ಭಕ್ತಿಯನ್ನು ತಿಳಿಸಿದ್ದಾರೆ .
0 ಕಾಮೆಂಟ್‌ಗಳು