Ticker

6/recent/ticker-posts

ಎರದ ಮುಳ್ಳಿನಂತೆ ಪರಗಂಡರೆನಗವ್ವಾ ।। ವಚನ ವಿಶ್ಲೇಷಣೆ ।। ಅಕ್ಕಮಹಾದೇವಿಯವರ ವಚನ

 ಶ್ರೀಗುರು ಬಸವಲಿಂಗಾಯ ನಮಃ



(ಈ ವಚನದ ಸರಳ ಸಂಪೂರ್ಣ ಚರ್ಚೆಯನ್ನು ಯೂಟ್ಯೂಬ್ ಚಾನಲ್ ನಲ್ಲಿ ವೀಕ್ಷಿಸಲು ಮೇಲಿನ ಲಿಂಕ್ ಬಳಸಿ)

ಎರದ ಮುಳ್ಳಿನಂತೆ ಪರಗಂಡರೆನಗವ್ವಾ. 
ಸೋಂಕಲಮ್ಮೆ ಸುಳಿಯಲಮ್ಮೆ; ನಂಬಿ ನಚ್ಚಿ ಮಾತಾಡಲಮ್ಮೆನವ್ವಾ. 
ಚೆನ್ನಮಲ್ಲಿಕಾರ್ಜುನನಲ್ಲದ ಗಂಡರಿಗೆ ಉರದಲ್ಲಿ ಮುಳ್ಳುಂಟೆಂದು ನಾನಪ್ಪಲಮ್ಮೆನವ್ವಾ,

    ಇಲ್ಲಿ ಅಕ್ಕನ  ವಚನವು  ತನಗೆ ಚೆನ್ನಮಲ್ಲಿಕಾರ್ಜುನನಲ್ಲದೆ ಬೇರೆ ಯಾವುದೇ ಲೋಕದ  ಪುರುಷರು ನಿಜ ಸಂಗಾತಿ ಆಗಲು ಸಾಧ್ಯವಿಲ್ಲ  ಎಂದು ಸ್ಪಷ್ಟಪಡಿಸುತ್ತಾರೆ. ಇತರ ಪುರುಷರನ್ನು ಅವರು "ಮುಳ್ಳು" ಎಂದು ಹೋಲಿಸುತ್ತಾ, ಅವರನ್ನು ಸ್ಪರ್ಶಿಸಲು ಅಥವಾ ಅವರೊಂದಿಗೆ ಸಂಬಂಧ ಬೆಳೆಸಲು ಸಾಧ್ಯವಿಲ್ಲ ಎಂದು ಹೇಳುತ್ತಾರೆ. ಅಂತಿಮವಾಗಿ, ತಮ್ಮ ಏಕೈಕ ಮತ್ತು ನಿಜವಾದ ಸಂಗಾತಿ ಚೆನ್ನಮಲ್ಲಿಕಾರ್ಜುನ ಮಾತ್ರ ಎಂಬುದನ್ನು ಪುನರುಚ್ಚರಿಸುತ್ತಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು